ವೋಟ್ ಯಾರಿಗೆ ಬೇಕಾದರೂ ಹಾಕಿ ಅದು ನಿಮ್ಮ ಇಷ್ಟ ಆದರೆ ವೋಟ್ ಹಾಕುವ ಮೊದಲು ಕೆಲವೊಂದು ವಿಚಾರಗಳನ್ನು ಮನವರಿಕೆ ಮಾಡಿಕೊಳ್ಳಿ.
ಇತ್ತಿಚೆಗೆ ದಕ್ಷಿಣ ರಾಜ್ಯಗಳಲ್ಲಿ ಎಲ್ಲಿಗೆ ಹೋದರೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಉತ್ತರ ಭಾರತೀಯರು ಹೆಚ್ಚಾಗಿ ಕಾಣಸಿಗುತ್ತಾರೆ,
ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಸ್ಸಾ ರಾಜ್ಯಗಳ ಜನರು ಹೆಚ್ಚಾಗಿ ಕಾಣಸಿಗುತ್ತಾರೆ,
ಒಂದೊಮ್ಮೆ ನಮ್ಮ ದಕ್ಷಿಣ ರಾಜ್ಯಗಳಿಂದ ಮುಂಬೈಗೆ ಉದ್ಯೋಗ ಅರಸಿ ಹೋಗುತ್ತಿದ್ದರು,
ಈಗ ಬದಲಾಗಿದೆ ಈಗ ಉತ್ತರದ ಜನ ದಕ್ಷಿಣಕ್ಕೆ ಬರುತ್ತಾರೆ, ಇದಕ್ಕೇನು ಕಾರಣ.?
ಹೆಚ್ಚು ಮಾನವ ಸಂಪನ್ಮೂಲ ಇರುವ ರಾಜ್ಯಗಳಲ್ಲಿ ಯಾಕೆ ಕೈಗಾರಿಕೆಗಳು ತಲೆ ಎತ್ತುತ್ತಿಲ್ಲ ಉದ್ಯೋಗಾವಕಾಶ ಯಾಕೆ ಸೃಷ್ಟಿ ಆಗುವುದಿಲ್ಲ.?
ಯಾಕೆಂದರೆ ಉತ್ತರ ಹುಡುಕಲು ಹೋದರೆ ಮೊದಲು ಸಿಗುವ ಉತ್ತರ ಕಾನೂನು ಸುವ್ಯವಸ್ಥೆ ಸರಿಯಿಲ್ಲ,
ಒಂದು ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಿ ಯಾವ ರಾಜ್ಯದಲ್ಲಿ ಸದಾ ಗಲಭೆ ದರೋಡೆ ಕಳ್ಳತನ ಅತ್ಯಾಚಾರದಂತಹ ಘಟನೆ ಹೆಚ್ಚಾಗಿ ನಡೆಯುತ್ತಾ ಇರುತ್ತದೋ ಅಲ್ಲಿ ಯಾರಿಗಾದರೂ ಹೂಡಿಕೆ ಮಾಡಲು ಏನು ತಲೆ ಕೆಟ್ಟಿದೆಯೇ.<